ಪ್ರೀತಿಗಾಗಿ ತಾಜ್‌ಮಹಲ್ ಎಂಬ ಗೋರಿ ಕಟ್ಟುವುದು ಎಂಥ ಮಹತ್ತರ ತ್ಯಾಗ, ಮಧುರಾತಿ ಭಾವನೆ ಅಂತ ನನಗೇನೂ ಅನ್ನಿಸೋದಿಲ್ಲ. ತಾಜ್‌ಮಹಲ್ ನೆನಪಾದಾಗಲೆಲ್ಲ ಸವತಿಯರ ಕಾಟಕ್ಕೆ, ಷಹಜಾನನ ಸಾಮ್ರಾಜ್ಯ ವಿಸ್ತರಣೆ ವ್ಯಸನಕ್ಕೆ ಬಲಿಯಾದ ಮಮತಾಜಳ ಆತ್ಮದ ಕೊರಗು ನನಗೆ ಕೇಳಿಸುತ್ತದೆ. ಎಲ್ಲೋ ಹೂತಿಟ್ಟ ಮಮತಾಜಳ ಹೆಣವನ್ನು ಆಗ್ರಾದ ಯಮುನಾ ನದಿ ದಂಡೆಯ ತಾಜಮಹಲಕ್ಕೆ ತಂದು ಮತ್ತೆ ಹೂತಿದ್ದು ಎಲ್ಲೇ ಪ್ರೀತಿ ಹುಟ್ಟಿದರೂ ಅದನ್ನು ಮತ್ತೆ ಮತ್ತೆ ಗೋರಿಯಾಗಿಸುವ ಸಾಂಕೇತಿಕ ರೂಪದಂತೆ ಕಾಣಿಸುತ್ತದೆ.
ಇರಲಿ, ವಿಷಯಕ್ಕೆ ಬರುವೆ. ಇದು ತಾಜಮಹಲ ಕಟ್ಟುವುದಿರಲಿ, ಬೆಂಗಳೂರಿನ ಸಿಮೆಂಟ್ ಕಾಡಿನಲಿ ನೆಟ್ಟಗೆ ಬಾಡಿಗೆಯನ್ನೂ ಕಟ್ಟಲಾರದಿದ್ದ ಅಮರ ಪ್ರೇಮಿಯ ಕಥೆ.
ಈತ ತನ್ನ ಪ್ರಿಯತಮೆಯ ಗೋರಿಯನ್ನು ಪ್ರೇಮದ ಸಂಕೇತವಾಗಿಸಲಿಲ್ಲ. ಪ್ರೇಮದ ಸಂಕೇತಕ್ಕಾಗಿ ತಾನೇ ಗೋರಿಯಾಗಿ ಹೋದವನು. ಹೀಗೆ ಪ್ರೀತಿಸಬೇಕು ಪ್ರೇಮಿಸುವವರ ಅಫೆಕ್ಷನ್, ಕೇರಿಂಗ್, ಇನ್‌ಫ್ಯಾಚುಯೇಷನ್, ಕಮಿಟ್‌ಮೆಂಟ್, ಲಾಯಲ್‌ಟಿ- ಇವೆಲ್ಲವನ್ನೂ ಹೇಳಿಕೊಡಲು ನೂರಾರು ಮಂದಿ ದಲ್ಲಾಳಿಗಳಿದ್ದಾರೆ. ಹೀಗೇ ಪ್ರೀತಿಸಿರಿ ಎನ್ನಲು ಪುಂಖಾನುಪುಂಖಿ ವಕ್ತಾರರಿದ್ದಾರೆ. ಆದರೆ ಇವನದೊಂದು ಕಥೆ ಕೇಳಿಬಿಡಿ. ಹೀಗೆ ಪ್ರೀತಿಸಲೇಬಾರದು ಎಂಬುದಕ್ಕೆ ಇವನು ಎಲ್ಲಿಯೂ ಪ್ರಸಾರವಾಗದ ಸಾಕ್ಷ್ಯಚಿತ್ರ.
ಈ ಕಥೆಯನ್ನು ಕಣ್‌ಸಾಕ್ಷಿಯಾಗಿ ಹೇಳುವವರಿದ್ದಾರೆ. ಈ ಕಥೆ ಹೇಳುತ್ತ ಆತ್ಮಸಾಕ್ಷಿಯಿಂದ ಅತ್ತವರಿದ್ದಾರೆ. ನಾನು ಈ ಕಥೆ ಕೇಳಿದ ಮೇಲೆ ಉಂಟಾದ ಎಲ್ಲ ನೋವುಗಳನ್ನು ಇದನ್ನು ಓದಬಹುದಾದ ನಿಮ್ಮೆದೆಗೆ ಒಗಾಯಿಸಿ ಸುಮ್ಮನಾಗಿಬಿಡುತ್ತೇನೆ.
ನಿಮಗೂ ಗೊತ್ತಿರಬಹುದು. ಲಂಕೇಶ್ ಪತ್ರಿಕೆಗೂ ಮುನ್ನ ಕರ್ನಾಟಕ ರಾಜ್ಯದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ ಕಾಲಿಟ್ಟಿದ್ದು ಕಿಡಿ ಪತ್ರಿಕೆಯಿಂದ. ಲಂಕೇಶರಿಗಿದ್ದ ಸಾಮಾಜಿಕ ದೃಷ್ಟಿಕೋನ, ಸಾಹಿತ್ಯದ ಅರಿವು, ವ್ಯವಸ್ಥೆಯನ್ನು ತಿದ್ದುವ - ತೀಡುವ ಚಿಕಿತ್ಸಕ ಅಂಕುಶತ್ವ ಇವ್ಯಾವುವೂ ಇಲ್ಲದೆ ಹೋದರೂ ಕಿಡಿ ಪತ್ರಿಕೆ ಬಹು ದೊಡ್ಡ ಭಯವನ್ನಂತೂ ಆಳುವವರ - ಉಳ್ಳವರ ಎದೆಯಲ್ಲಿ ಸೃಷ್ಟಿಸಿತ್ತು. ಕಿಡಿ ಪತ್ರಿಕೆಯ ಸಂಪಾದಕರ ಹೆಸರು ಶೇಷಪ್ಪ. ಕಿಡಿಶೇಷಪ್ಪ ಎಂತಲೇ ಹೆಸರುವಾಸಿ. ಆ ಕಾಲಕ್ಕೆ ಮುದ್ರಣ ಮಾಧ್ಯಮವೇ ತೀರ ಹೊಸತು. ಅದರಲ್ಲೂ ಟ್ಯಾಬ್ಲಾಯ್ಡ್ ಎಂಬ ವಾರವಾರಕ್ಕೆ ಬರುವ ಅಗ್ನಿದಿವ್ಯ ಇನ್ನೂ ಯಾರಿಗೂ ಹೊಳೆದಿರಲಿಲ್ಲ. ಅಂತಹಾ ಕಾಲಘಟ್ಟದಲ್ಲೆ ಕಿಡಿ ಶೇಷಪ್ಪ ಭಂಡರ, ಭ್ರಷ್ಟರ, ಬಿಳಿಯಾನೆಗಳ ಬದ್ಧತೆಯಿಲ್ಲದ ರಾಜಕಾರಣಿಗಳ ಕಪಾಳಕ್ಕೆ ಹೊಡೆಯುವಂತೆ ವರದಿ ಬರೆಯುತ್ತಿದ್ದರು. ಏಕಮಾದ್ವಿತೀಯನಾಗಿ ಪತ್ರಿಕೆ ಆರಂಭಿಸಿದ ಶೇಷಪ್ಪ ನಿಜಕ್ಕೂ ಸತ್ಯದ ಕಿಡಿಯೇ ಆಗಿದ್ದರು. ಅವರು ಬರೆಯುತ್ತಿದ್ದ ವರದಿಗಳು ನಿಷ್ಠುರತೆ, ಬಳಸುತ್ತಿದ್ದ ಭಾಷೆ ತುಂಬ ಕತ್ತಿಗಿಂತ ಹರಿತವಾಗಿತ್ತು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪೆನ್ ಇಸ್ ಪವರ್‌ಫುಲ್ ದ್ಯಾನ್ ಸೋರ್ಡ್ ಎಂದು ಸಾಬೀತುಪಡಿಸಿದ್ದೇ ಶೇಷಪ್ಪ.
ಶೇಷಾದ್ರಿಪುರಂನ ಅವರ ಕಛೇರಿಯಲ್ಲಿ ಸಣ್ಣದೊಂದು ದಿವಾನ್ ಕಾಟ್ ಹಾಕಿಕೊಂಡು, ಅಲ್ಲೇ ಒಂದು ಟೇಬಲ್ ಇಟ್ಟುಕೊಂಡು ಶೇಷಪ್ಪ ಹಗಲೂ ಇರುಳೂ ಬರೆಯುತ್ತಿದ್ದರು. ಚುನಾವಣೆ ಬಂದಕೂಡಲೆ ಕಾಸಿಗಾಗಿ ಸುದ್ದಿ ಮತ್ತು ಡಿಸೈನ್‌ಡಿಸೈನ್ ಪ್ಯಾಕೇಜ್‌ಗಳಲ್ಲಿ ದುಡ್ಡು ದೋಚುವ ಮಾಧ್ಯಮ ಭ್ರಷ್ಟತೆಯನ್ನೇನಾದರೂ ಶೇಷಪ್ಪ ನೋಡಿದ್ದರೆ ಮಾಧ್ಯಮದ ವಿರುದ್ಧವೇ ಸಿಡಿದೇಳುತ್ತಿದ್ದರು. ಯಾವತ್ತಿಗೂ ಎಂಥ ಸಂದರ್ಭಕ್ಕೂ ಯಾವುದೇ ರಾಜಕಾರಣಿಯನ್ನೂ ಅಧಿಕಾರಿಯನ್ನೂ ಹೋಗಿ ಶೇಷಪ್ಪ ಭೇಟಿಯಾಗುತ್ತಿರಲಿಲ್ಲ. ಯಾರಾದರೂ ಅಧಿಕಾರಿಗಳು ರಾಜಕಾರಣಿಗಳು ಶೇಷಪ್ಪನನ್ನು ಹುಡುಕಿಕೊಂಡೇ ಬಂದರೆ ಕಛೇರಿಯಲ್ಲಿ ಪಂಚೆ - ಬನಿಯನ್‌ನಲ್ಲೇ ಬರೆಯುತ್ತ ಕುಳಿತಿರುತ್ತಿದ್ದ ಶೇಷಪ್ಪ ಸಂಪಾದಕರು ಆಚೆಗೆ ಹೋಗಿದಾರೆ. ಅವರು ಬಂದಾಗ ಹೇಳ್ತೀನಿ ಅಂತಂದು ಕಳಿಸಿಬಿಡುತ್ತಿದ್ದರು.
ಯಾರಾದರೂ ರಾಜಕಾರಣಿಗಳ ಜರಿದು ವರದಿ ಬರೆದಿರುತ್ತಿದ್ದರೆ, ಅವರ ಮನೆಗೆ ತಾನೇ ಹೋಗಿ ಪತ್ರಿಕೆ ಕೊಟ್ಟು ಶೇಷಪ್ಪನವರು ಕೊಟ್ಟರು ಅಂತ ಹೇಳಿ ಬರುತ್ತಿದ್ದರು.
ಕ್ರಮೇಣ ಆಫೀಸ್ ಬಾಯೇ ಈ ಸಂಪಾದಕ ಶೇಷಪ್ಪ ಎಂದು ಎಲ್ಲರಿಗೂ ಗೊತ್ತಾಗಿಹೋಯ್ತು. ನಿಜಕ್ಕೂ ತನಿಖಾ ಪತ್ರಿಕೋದ್ಯಮದಲ್ಲಿರುವ ಯಾವುದೇ ಪತ್ರಕರ್ತ ಇಷ್ಟು ನಿಷ್ಠುರವಾಗಿ ಬದುಕುವುದು ಆ ಕಾಲಕ್ಕಂತೂ ಒಂದು ವಿಸ್ಮಯವಾಗಿತ್ತು.
ಶೇಷಪ್ಪನಿಗೆ ಅದೆಂತಹ ಹಟವಿತ್ತೆಂದರೆ ರಾಜಕಾರಣಿಗಳಿಂದಿರಲಿ, ಬೇರೆ ಯಾರಿಂದಲೂ ಸಿಗರೇಟ್ ಕೂಡ ಪಡೆದು ಸೇದುತ್ತಿರಲಿಲ್ಲ. ಇನ್ನು ಮದ್ಯದ ಮಾತು ಬಿಡಿ. ಇನ್ನು ಅಕ್ಷರಶಃ ಅಕ್ಷರಗಳನ್ನೆ ನಂಬಿ ಬದುಕಿದ ಆ ಜೀವದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂತಹ ಹೊತ್ತಿನಲ್ಲೆ ಅತ್ಯಂತ ಕಡಿಮೆ ಭ್ರಷ್ಟ ಎನ್ನಿಸಿಕೊಂಡಿದ್ದ - ಒಂದು ಲೆಕ್ಕದಲ್ಲಿ ಪ್ರಾಮಾಣಿಕ ಎನ್ನಿಸಿಕೊಂಡಿದ್ದ ಒಬ್ಬ ರಾಜಕಾರಣಿ ರೇಸ್‌ಕೋರ್ಸ್ ರೋಡಿನಲ್ಲಿ ಹೋಗುತ್ತಿದ್ದ ಶೇಷಪ್ಪನನ್ನು ಮಾತನಾಡಿಸಿದ್ದಾರೆ. ಇಬ್ಬರಿಗೂ ಬಹಳ ಹಳೆಯ ಸಲುಗೆ. ಆಗಾಗ ಸಿಕ್ಕು ಕಾಫಿ ಕುಡಿಯುವಷ್ಟು ಸಣ್ಣ ಸ್ನೇಹ. ಒಂಚೂರು ಪರಸ್ಪರ ನಂಬುಗೆ ಇರುತ್ತದೆ. ಆ ರಾಜಕಾರಣಿ (ಅವರ ಹೆಸರು ಬೇಡ ಬಿಡಿ), ಶೇಷಪ್ಪರನ್ನು ಪುಸಲಾಯಿಸಿ ಕಬ್ಬನ್‌ಪಾರ್ಕ್ ಪಕ್ಕದಲ್ಲಿದ್ದ ವಿಷ್ಣು ಕೆಫೆಗೆ ಕಾಫಿಗೆ ಕರೆದೊಯ್ಯುತ್ತಾರೆ. ಕಾಫಿ ಕುಡಿಯುತ್ತ ಶೇಷಪ್ಪ, ನಿನ್ನ ಮುಖ ನೋಡಿಕೋ, ಎಷ್ಟು ಸೊರಗಿ ಹೋಗಿದ್ದೀಯ. ಅದೆಷ್ಟು ದಿವಸವಾಯಿತೋ ಮನೆಗೆ ಹೋಗಿ. ಸಮಾಜ ತಿದ್ದಲು ಹೊರಟವರು ಅಚ್ಚಕಟ್ಟಾಗಿ ಉಂಡುತಿಂದು ಆರೋಗ್ಯವಂತರಾಗಿ ಇರಬಾರದು ಎಂಬ ಕಾನೂನೇನಾದರೂ ಇದೆಯೇನಯ್ಯ? ಎಂದು ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ. ...
-ಪೂರ್ಣಭಾಗವನ್ನು ಪತ್ರಿಕೆಯಲ್ಲಿ ಓದಿ... ಹೆಚ್ಚಿನ ವಿವರಗಳಿಗೆ http://navilu.zohosites.com ಗೆ ಭೇಟಿಕೊಡಿ

No comments:
Post a Comment